ಮನೆ ಬಾಡಿಗೆ ಪಡೆದ್ಮೇಲೆ ಬಾಡಿಗೆ ಕಟ್ಟಲೇಬೇಕು. ಅಕಸ್ಮಾತ್ ಏನೋ ಕಷ್ಟ ಅಂದ್ರೆ ಹೋಗ್ಲಿ ಒಂದು ತಿಂಗಳು ಬಿಟ್ಟು ಕೊಡಿ ಅಂತ ಮಾಲೀಕ ಹೇಳ್ಬೋದು. ಆದ್ರೆ ಇಲ್ಲೊಬ್ಬ ಬಾಡಿಗೆ ಕೇಳಿದ್ದಕ್ಕೆ ಮಹಿಳೆ ಅಂತಾನು ನೋಡದೆ ಚಾಕುವಿನಿಂದ ಮುಖವನ್ನೇ ಕೊಯ್ದಿದ್ದಾನೆ. ನ್ಯಾಯ ಕೊಡ್ಸಿ ಅಂತ ಪೊಲೀಸ್ ಠಾಣೆ ಮೆಟ್ಟಿಲೇರಿದ್ರೆ ರಕ್ಷಣೆ ಮಾಡಬೇಕಾದ ಪೊಲೀಸ್ರ ವಸೂಲಿಗಿಳಿದಿದ್ದಾರೆ.ಬೆಂಗಳೂರಿನಲ್ಲಿ ಬಾಡಿಗೆ ಕೇಳೋದೆ ತಪ್ಪಾ ಅನ್ಸತ್ತೆ. ಯಾಕಂದ್ರೆ ಮಹಿಳೆಯೊಬ್ಬರು ಬಾಡಿಗೆ ಕೇಳಿದ್ದಕ್ಕೆ ಆಕೆಯನ್ನ ಮುಖವನ್ನ ಹೇಗೆ ಕುಯ್ದಿದ್ದಾರೆ ನೋಡಿ.