ಕೊರೊನಾ ಮಹಾಮಾರಿಗೆ ತುತ್ತಾದ ನವವಿವಾಹಿತೆ

ಶಿವಮೊಗ್ಗ| pavithra| Last Modified ಭಾನುವಾರ, 30 ಮೇ 2021 (09:11 IST)
ಶಿವಮೊಗ್ಗ: ಕೊರೊನಾ ಎರಡನೇ ಅಲೆಗೆ ಸಾಕಷ್ಟು ಜನ ಬಲಿಯಾಗಿದ್ದಾರೆ. ಅನೇಕ ಕನಸುಗಳನ್ನು ಕಟ್ಟಿಕೊಂಡು ಹಸೆಮಣೆ ಏರಿದ ಯುವತಿಯೊಬ್ಬಳು ಈ ಕೊರೊನಾ ಮಹಾಮಾರಿಗೆ ಬಲಿಯಾದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ಮದುವೆಯಾಗಿ ಕೆಲವೇ ದಿನಗಳಲ್ಲಿ  ಕೊರೊನಾ ಸೋಂಕಿನ ಕಾರಣದಿಂದ ಪೂಜಾ ಎಂಬಾಕೆ ಮೃತಪಟ್ಟಿದ್ದಾಳೆ. ಮಹೇಶ್ ಮತ್ತು ಪೂಜಾ ವಿವಾಹವು ಸೋಮವಾರ ನಡೆದಿತ್ತು.ಗುರುವಾರ ಸಂಜೆ ಪೂಜಾ ಕೊರೊನಾ ಕಾರಣದಿಂದ ಪ್ರಾಣ ಕಳೆದುಕೊಂಡಿದ್ದಾಳೆ.

ಮದುವೆಯಾಗಿ ಎರಡೇ ದಿನಕ್ಕೆ ಕೊರೊನಾ ಲಕ್ಷಣಗಳು ಕಂಡುಬಂದಿದ್ದು, ಖಾಸಗಿ ಕ್ಲಿನಿಕ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಪೂಜಾ ಮೃತಪಟ್ಟಿದ್ದಾಳೆ. ಮದುವೆಯ ಸಂತಸದಲ್ಲಿದ್ದ ಮನೆಯಲ್ಲಿ ಈಗ ದುಃಖದ ನೋವು ಮಡುಗಟ್ಟಿದೆ.

ಇದರಲ್ಲಿ ಇನ್ನಷ್ಟು ಓದಿ :