ಅನ್ವಾಂಟೆಡ್ ಪಾರ್ಟಿಗಳಲ್ಲಿ ಮಹಿಳೆಯರ ಮೇಲೆ ಅತ್ಯಾಚಾರಗಳಾಗುತ್ತವೆಯೇ ಹೊರತು ಜಾತ್ರೆಗಳಲ್ಲಿ ಅಲ್ಲ ಎಂದು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಭಾರತಿ ಶಂಕರ್ ನೀಡಿದ ಹೇಳಿಕೆ ವಿವಾದಕ್ಕೆ ಗುರಿಯಾಗಿದೆ. ಬಿ.ಪ್ಯಾಕ್ ಮತ್ತು ಬೆಂಗಳೂರು ಸಿಟಿ ಪೋಲಿಸ್ ಆಯೋಜಿಸಿದ ಎ ಬಿಲಿಯನ್ ಐಸ್ ಎನ್ನುವ ಅಭಿಯಾನದಲ್ಲಿ ಪಾಲ್ಗೊಂಡು ಮಹಿಳಾ ಸುರಕ್ಷತೆಯ ಬಗ್ಗೆ ಚರ್ಚೆಯಲ್ಲಿ ಅವರು ಮಾತನಾಡುತ್ತಿದ್ದರು. ಮಹಿಳೆಯರು ಕಿರುಕುಳಕ್ಕೊಳಗಾದಾಗ ಮಧ್ಯಪ್ರವೇಶಿಸಲು ಪ್ರೇಕ್ಷಕರ ಮೇಲೆ ಈ ಪ್ರಚಾರವು ಉತ್ತೇಜನ ನೀಡಲು ಕಾರಣವಾಗುತ್ತದೆ