ಬೆಂಗಳೂರು : ಶಬರಿಮಲೆಗೆ ಮಹಿಳೆಯರ ಪ್ರವೇಶದ ಹಿನ್ನಲೆ ಇಂದು ಶಬರಿಮಲೆ ಬಂದ್ ಮಾಡಲು ಆಡಳಿತ ಮಂಡಳಿ ನಿರ್ಧಾರ ಮಾಡಿದೆ. ವಿರೋಧದ ನಡುವೆಯೂ ಇಂದು ಬೆಳಗ್ಗೆ 3.45ರ ವೇಳೆಗೆ ಪೊಲೀಸರ ರಕ್ಷಣೆಯಲ್ಲಿ 40 ವರ್ಷದ ಮಹಿಳೆಯರಿಬ್ಬರು ಅಯ್ಯಪ್ಪ ದೇವಾಲಯವನ್ನು ಪ್ರವೇಶಿಸಿ ಅಯ್ಯಪ್ಪನ ದರ್ಶನ ಪಡೆದಿದ್ದಾರೆ. ಈ ಹಿನ್ನಲೆಯಲ್ಲಿ ಇದೀಗ ದೇವಾಲಯವನ್ನು ಶುದ್ಧೀಕರಣಗೊಳಿಸಲು ದೇವಸ್ವಂ ಆಡಳಿತ ಮಂಡಳಿ ಶಬರಿಮಲೆ ಅಯ್ಯಪ್ಪಸ್ವಾಮಿ ದೇಗುಲವನ್ನು ಬಂದ್ ಮಾಡುವ ನಿರ್ಧಾರ ಮಾಡಿದೆ ಎಂಬುದಾಗಿ ತಿಳಿದುಬಂದಿದೆ. ತಾಜಾ ಸುದ್ದಿಗಳನ್ನು