ಬೇಸಿಗೆ ಕಾಲದಲ್ಲಿ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಕಡ್ಡಾಯದಿಂದ ರಿಯಾಯಿತಿ ನೀಡಬೇಕೆಂದು ಒತ್ತಾಯ ಕೇಳಿಬಂದಿದೆ.ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನ ಮಹಿಳೆಯರು ಜಿಲ್ಲಾರಕ್ಷಣಾಧಿಕಾರಿಗಳಿಗೆ ಹೀಗಂತ ಮನವಿ ಸಲ್ಲಿಸಿದ್ದಾರೆ. ಜಿಲ್ಲಾ ಎಸ್.ಪಿ. ಕಚೇರಿಗೆ ಭೇಟಿ ನೀಡಿದ ಮಹಿಳೆಯರು, ಬೇಸಿಗೆ ಕಾಲದಲ್ಲಿ, ತಾಪಮಾನ ಹೆಚ್ಚಾಗಲಿದ್ದು ಹೆಲ್ಮೆಟ್ ಧರಿಸಿದರೆ ಸೆಖೆಯಿಂದಾಗಿ, ಅನೇಕ ಖಾಯಿಲೆಗಳು ಬರುವ ಸಂಭವವಿದೆ. ಉತ್ತರ ಕರ್ನಾಟಕ ಮಾದರಿಯಲ್ಲಿ ನಮ್ಮಲ್ಲಿಯೂ ಬೇಸಿಗೆ ಕಾಲದಲ್ಲಿ ಹೆಲ್ಮೆಟ್ ನಿಂದ ರಿಯಾಯಿತಿ ನೀಡಬೇಕೆಂದು ಒತ್ತಾಯಿಸಿದ್ದಾರೆ. ಈಗಿನ್ನು ಚಳಿಗಾಲ ಮುಗಿದು ಬೇಸಿಗೆ