ಕೈ ಪಾಳೆಯದ ಕಾರ್ಯಕರ್ತರಿಗೆ ಕಾರ್ಯಾಗಾರ

ಚಾಮರಾಜನಗರ, ಮಂಗಳವಾರ, 6 ನವೆಂಬರ್ 2018 (16:27 IST)

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ರಣತಂತ್ರ ರೂಪಿಸಲು ಬೂತ್ ಅಧ್ಯಕ್ಷರು ಹಾಗೂ ಪಕ್ಷದ ಪ್ರತಿನಿಧಿಗಳಿಗೆ ಕಾಂಗ್ರೆಸ್ ತರಬೇತಿ ಹಮ್ಮಿಕೊಂಡಿದೆ.

ಚಾಮರಾಜನಗರ ಜಿಲ್ಲಾ ಕಾಂಗ್ರೆಸ್ ವತಿಯಿಂದ ಬೂತ್ ಅಧ್ಯಕ್ಷರು ಹಾಗೂ ಪಕ್ಷದ ಪ್ರತಿನಿಧಿಗಳಿಗೆ ಗುಂಡ್ಲುಪೇಟೆ ತಾಲ್ಲೂಕಿನ ಪಾರ್ವವತಿ ಬೆಟ್ಟದಲ್ಲಿ ತರಬೇತಿ ಕಾರ್ಯಗಾರ ಹಮ್ಮಿಕೊಳ್ಳಲಾಗಿತ್ತು.

ಚಾಮರಾಜನಗರದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ತರಬೇತಿ  ಕಾರ್ಯಾಗಾರಕ್ಕೆ ಎಐಸಿಸಿ ಕಾರ್ಯದರ್ಶಿ ವಿಶ್ವನಾಥನ್  ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಸ್ಥಳೀಯ ಸಂಸದ ಆರ್.ಧ್ರುವನಾರಾಯಣ್, ಮುಂಬರುವ ಸಂಸತ್ ಚುನಾವಣೆಯಲ್ಲಿ ಬಿಜೆಪಿಯ ಪೊಳ್ಳು ಭರವಸೆಯನ್ನ ಜನರಿಗೆ ಮನವರಿಕೆ ಮಾಡಿಕೊಡಬೇಕೆಂದರು.
ಜಾತ್ಯಾತೀತ ಭಾರತವನ್ನ ಹಿಂದೂ ರಾಷ್ಟವನ್ನಾಗಿಸಲು ಆರ್ ಎಸ್ ಎಸ್ ನಡೆಸುತ್ತಿರುವ ಕುತಂತ್ರ ಮತದಾರರಿಗೆ ಮನದಟ್ಟುಮಾಡಿ, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನ ಅಧಿಕಾರಕ್ಕೆ ತರಲು ಇಂದಿನಿಂದಲೇ ಪ್ರಯತ್ನಿಸಬೇಕೆಂದು ಕಾರ್ಯಕರ್ತರಿಗೆ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ, ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಜಿಲ್ಲಾ ಪಂಚಾಯಿತಿಯ ಕೆರಹಳ್ಳಿನವೀನ್ , ನಂಜುಂಡ ಪ್ರಸಾದ್ ಹಾಗೂ ಕಾಂಗ್ರೆಸ್ ನ  ಪ್ರಮುಖರು ಉಪಸ್ಥಿತರಿದ್ದರು.


 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಉಪಚುನಾವಣೆಯಲ್ಲಿ ಬಿಜೆಪಿ ನೈತಿಕವಾಗಿ ಗೆದ್ದಿದೆ ಎಂದ ಶಾಸಕ

ಪಂಚ ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶ ಹಿನ್ನೆಲೆ ಬಿಜೆಪಿ ಪಕ್ಷ ನೈತಿಕವಾಗಿ ಗೆದ್ದಿದೆ ಎಂದು ಬಿಜೆಪಿ ಶಾಸಕ ...

news

ಕುಖ್ಯಾತ ಬೈಕ್ ಕಳ್ಳತನ ಆರೋಪಿಗಳ ಬಂಧನ

ಕುಖ್ಯಾತ ಬೈಕ್ ಕಳ್ಳತನ ಆರೋಪಿಗಳನ್ನು ಬಂಧನ ಮಾಡಲಾಗಿದೆ.

news

ಉಪ ಸಮರ ಫಲಿತಾಂಶ: ಕಾಂಗ್ರೆಸ್, ಜೆಡಿಎಸ್ ಕಾರ್ಯಕರ್ತರಿಂದ ವಿಜಯೋತ್ಸವ

ರಾಜ್ಯದ ಮೂರು ಲೋಕಸಭಾ ಮತ್ತು ಎರಡು ವಿಧಾನಸಭಾ ಕ್ಷೇತಗಳ ಉಪಚುನಾವಣೆ ಫಲಿತಾಂಶ ಹಿನ್ನಲೆ ಜೆಡಿಎಸ್ ಮತ್ತು ...

ಉಪ ಸಮರ ಫಲಿತಾಂಶ: ಕಾಂಗ್ರೆಸ್, ಜೆಡಿಎಸ್ ಕಾರ್ಯಕರ್ತರಿಂದ ವಿಜಯೋತ್ಸವ

ರಾಜ್ಯದ ಮೂರು ಲೋಕಸಭಾ ಮತ್ತು ಎರಡು ವಿಧಾನಸಭಾ ಕ್ಷೇತಗಳ ಉಪಚುನಾವಣೆ ಫಲಿತಾಂಶ ಹಿನ್ನಲೆ ಜೆಡಿಎಸ್ ಮತ್ತು ...