ಬೆಂಗಳೂರು: ವಿಶ್ವ ಹೃದಯ ದಿನದ ಅಂಗವಾಗಿ ಇದೇ ೨೯ ರಂದು (ಶನಿವಾರ) ಬಸವೇಶ್ವರ ನಗರದ ಪುಣ್ಯ ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ಶಿಬಿರವನ್ನು ಏರ್ಪಡಿಸಲಾಗಿದೆ. ಇಸಿಜಿ, ಮಧುಮೇಹ, ಅಧಿಕ ರಕ್ತದೊತ್ತಡ, ಇಎನ್ಟಿ, ಮೂಳೆ ರೋಗ, ಕಿಡ್ನಿ ಮತ್ತು ಮೂತ್ರಕೋಶ ಕುರಿತು ಉಚಿತ ಆರೋಗ್ಯ ತಪಾಸಣೆ ಮಾಡಲಾಗುವುದು. ಶನಿವಾರ ಬೆಳಿಗ್ಗೆ ೯ಕ್ಕೆ ಆರಂಭವಾಗುವ ಶಿಬಿರ ಮಧ್ಯಾಹ್ನ ೩ರವರೆಗೆ ನಡೆಯಲಿದೆ. ಇತ್ತೀಚೆಗೆ ವಯೋಮಾನದ ವ್ಯತ್ಯಾಸವಿಲ್ಲದೇ ಸಣ್ಣ ಪ್ರಾಯದವರನ್ನೂ ಕಾಡುತ್ತಿರುವ ಹೃದಯ ಸಂಬಂಧಿ ಕಾಯಿಲೆಗಳ ಸಂಖ್ಯೆ