ಇಂದು ವಿಶ್ವ ಅಮ್ಮಂದಿರ ದಿನ

ಬೆಂಗಳೂರು| Krishnaveni K| Last Modified ಭಾನುವಾರ, 9 ಮೇ 2021 (09:37 IST)
ಬೆಂಗಳೂರು: ಜಗತ್ತಿನಲ್ಲಿ ತನ್ನ ಮಕ್ಕಳನ್ನು ಎಲ್ಲರಿಗಿಂತ ಹೆಚ್ಚು ಪ್ರೀತಿಸುವ ತ್ಯಾಗಮಯಿ ಅಮ್ಮಂದಿರಿಗೆ ಇಂದು ಶುಭಾಶಯ ಹೇಳುವ ದಿನ.

 
ತಾಯಿ ಎನ್ನುವ ಪದಕ್ಕೆ ಇರುವ ಗೌರವ, ಬೆಲೆ ಮತ್ಯಾವ ಪದಕ್ಕೂ ಇರದು. ನಮ್ಮ ಜೀವನ ಆಕೆ ಕೊಟ್ಟ ಭಿಕ್ಷೆ. ಪ್ರಪಂಚದಲ್ಲಿ ಕೆಟ್ಟ ಮಕ್ಕಳಿರಬಹುದು, ಆದರೆ ಅಮ್ಮಂದಿರು ಇರಲ್ಲ ಎಂಬ ಶಂಕರಾಚಾರ್ಯರ ಮಾತಿನಂತೆ ಮಮತೆ, ತ್ಯಾಗ, ಕರುಣೆಯ ಪ್ರತಿರೂಪ ತಾಯಂದಿರ ದಿನವಿಂದು.
 
ಈ ದಿನದ ಅಂಗವಾಗಿ ತಾಯಂದಿರಿಗೆ ಗೌರವ ಸಲ್ಲಿಸಲು ಗೂಗಲ್ ವಿಶಿಷ್ಟ ಡೂಡಲ್ ಮೂಲಕ ಗೌರವ ಸಲ್ಲಿಸಿದೆ. ನೀವೂ ನಿಮ್ಮ ತಾಯಿಗೆ ವಿಶ್ ಮಾಡುವ ಮೂಲಕ ಆಕೆಗೊಂದು ಗೌರವ ಸಲ್ಲಿಸಿ.
ಇದರಲ್ಲಿ ಇನ್ನಷ್ಟು ಓದಿ :