ವಿಜಯನಗರ, ಸೆ 9 : ಯುನೆಸ್ಕೋ ವಿಶ್ವ ಪಾರಂಪರಿಕ ಸ್ಥಳಗಳ ಪಟ್ಟಿಗೆ ಸೇರಿದ ರಾಜ್ಯದ ಪ್ರಥಮ ಪ್ರವಾಸಿ ಸ್ಥಳವೆಂದರೆ ಅದು ವಿಶ್ವವಿಖ್ಯಾತ ಹಂಪಿ. ಆದರೆ ಅಲ್ಲಿನ ಇತಿಹಾಸ ಹಾಗೂ ಸ್ಮಾರಕಗಳ ಕಥೆ ಹೇಳುವ ಪ್ರವಾಸಿ ಮಾರ್ಗದರ್ಶಿಗಳ ಸದ್ಯದ ಜೀವನ ಮಾತ್ರ ಸಂಕಷ್ಟದಲ್ಲಿದೆ. ಕೊರೊನಾ ಕಾರಣದಿಂದಾಗಿ ಕಳೆದ ಎರಡು ವರ್ಷದಿಂದ ಪ್ರವಾಸಿಗರಿಲ್ಲದೆ, ಸರಿಯಾದ ದುಡಿಮೆಯೂ ಇಲ್ಲದೆ, ಕಷ್ಟದಲ್ಲಿ ಜೀವನ ನಡೆಸುತ್ತಿದ್ದಾರೆ. ಮಾರ್ಗದರ್ಶನ ಮಾಡಲು ದಿನವೆಲ್ಲಾ ಕಾದರೂ ಪ್ರವಾಸಿಗರು ಹಂಪಿಯತ್ತ ಮುಖ ಮಾಡುತ್ತಿಲ್ಲ.