ಮೈಸೂರು : ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಹಿನ್ನಲೆ ಇಂದು ಅರಮನೆಯಲ್ಲಿ ಆಯುಧ ಪೂಜೆಯ ಸಂಭ್ರಮ ಮನೆಮಾಡಿದೆ.ಅರಮನೆಯಲ್ಲಿ ಆಯುಧ ಪೂಜೆ ಆರಂಭವಾಗಿದ್ದು, ಪಾರಂಪರಿಕ ಆಯುಧಗಳನ್ನು ಪಲ್ಲಕ್ಕಿಯಲ್ಲಿಟ್ಟು ಮೆರವಣಿಗೆ ಮಾಡಲಾಗಿದೆ. ರಾಜವಂಶಸ್ಥರು ಹಾಗೂ ಅರಮನೆ ಸಿಬ್ಬಂದಿ ನೇತೃತ್ವದಲ್ಲಿ ಪೂಜೆ ನೆರವೇರುತ್ತಿದೆ. ಬೆಳಗ್ಗೆ 10.10 ರಿಂದ 10.35 ರ ವರೆಗೆ ರಾಜವಂಶಸ್ಥ ಯದುವೀರ ಕೃಷ್ಣದತ್ತ ಒಡೆಯರ್ ಆಯುಧ ಪೂಜೆ ನೆರವೇರಸಲಿದ್ದಾರೆ. ಈಗಾಗಲೇ ಸಂಸದೆ ಶೋಭಾ ಕರಂದ್ಲಾಜೆ ಫಲ ತಾಂಬೂಲ ನೀಡುವುದರ ಮೂಲಕ, ಪುಷ್ಪಾರ್ಚನೆ