ಆಪರೇಷನ್ ಕಮಲ ಆಡಿಯೋ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿ ಯಡಿಯೂರಪ್ಪನವರಿಗೆ ಸಂಕಷ್ಟ ತಂದೊಡ್ಡಿದ್ದರೆ, ಇತ್ತ ಬಿಎಸ್ವೈ ಗೆ ಸಂಕಷ್ಟಗಳು ಬರದೇ ಇರಲಿ ಎಂದು ಗ್ರಹಗತಿಗಳ ಶಾಂತಿಗೆ ಪೂಜೆ ಸಲ್ಲಿಸಲಾಗಿದೆ.ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪನವರಿಗೆ ಆಡಿಯೋ ಸಂಕಷ್ಟ ಎದುರಾಗಿರುವ ಹಿನ್ನೆಲೆ ಗ್ರಹಗತಿಗಳ ಶಾಂತಿಗಾಗಿ ಮಂಡ್ಯದ ಬಿಜೆಪಿ ಕಾರ್ಯಕರ್ತರು ಶಕ್ತಿ ದೇವತೆಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಮಂಡ್ಯ ನಗರದ ಶಕ್ತಿ ದೇವತೆ ಕಾಳಿಕಾಂಬ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಬಿಎಸ್ವೈ ಹೆಸರಲ್ಲಿ ಅರ್ಚನೆಯನ್ನು ಕಾರ್ಯಕರ್ತರು ಮಾಡಿಸಿದ್ದಾರೆ.ಪೂಜೆ