ರಾಜಕೀಯಕ್ಕೆ ಬರುವ ಕುರಿತು ಸದ್ಯಕ್ಕೆ ಯಾವ ಆಸಕ್ತಿಯೂ ಇಲ್ಲ. ಹೀಗಂತ ಯದುವೀರ್ ಒಡೆಯರ್ ಹೇಳಿದ್ದಾರೆ.ಕಲಬುರಗಿಯಲ್ಲಿ ಮೈಸೂರು ಮಹಾಸಂಸ್ಥಾನದ ಮಹಾರಾಜ ಯದುವೀರ್ ಒಡೆಯರ್ ಹೇಳಿಕೆ ನೀಡಿದ್ದು, ಮೈಸೂರು ಮಹಾಸಂಸ್ಥಾನಕ್ಕೆ ಎಲ್ಲಾ ಪಕ್ಷಗಳ ಮುಖಂಡರು ಸೌಜನ್ಯಯುತ ಭೇಟಿ ನೀಡುತ್ತಿರುತ್ತಾರೆ. ಮೊದಲಿನಿಂದಲೂ ಸೌಜನ್ಯಯುತವಾಗಿ ಎಲ್ಲಾ ಪಕ್ಷದ ಮುಖಂಡರು ಭೇಟಿ ನೀಡುತ್ತಿರುತ್ತಾರೆ ಎಂದರು. ರಾಜಕೀಯ ಕ್ಷೇತ್ರದ ಹೊರತಾಗಿಯೂ ಸಮಾಜ ಸೇವೆಯನ್ನು ಮಾಡಬಹುದು. ರಾಜಕೀಯಕ್ಕೆ ಬಂದೇ ಸಮಾಜದ ಸೇವೆ ಮಾಡಬೇಕು ಎಂದೇನಿಲ್ಲ. ಈಗಾಗಲೇ ಮೈಸೂರು ಅರಮನೆ ಮೂಲಕ ಅನೇಕ