ಬೆಂಗಳೂರು: ನಿನ್ನೆಯಷ್ಟೇ ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ದ ಮತ್ತೊಂದು ಬಾಂಬ್ ಸಿಡಿಸುತ್ತೇನೆ ಎಂದಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಇಂದು ಮತ್ತೊಂದು ಬಾಂಬ್ ಸಿಡಿಸಿದ್ದಾರೆ. ಸ್ಟೀಲ್ ಫ್ಲೈ ಓವರ್ ನಿರ್ಮಾಣದ ವಿಷಯದಲ್ಲಿ ಸಿದ್ದರಾಮಯ್ಯಗೆ 65 ಕೋಟಿ ರೂ. ಸಂದಾಯವಾಗಿದೆ ಎಂದು ಯಡಿಯೂರಪ್ಪ ಆರೋಪಿಸಿದ್ದಾರೆ. ಈ ವಿಷಯವೂ ಗೋವಿಂದರಾಜು ಅವರ ಡೈರಿಯಲ್ಲಿದೆ. ಸಿದ್ಧರಾಮಯ್ಯ ಅಕ್ರಮದ ಬಗ್ಗೆ ಅಧಿಕಾರಿಗಳು, ಕಾಂಗ್ರೆಸಿಗರೇ ನನಗೆ ಮಾಹಿತಿ ನೀಡಿದ್ದಾರೆ.ಡೈರಿ ಸಿಕ್ಕಿದ್ದು ನಿಜವೋ ಸುಳ್ಳೋ ಎಂದು ಸದನದಲ್ಲಿ ಹೇಳಿಕೆ