ಮೈಸೂರು: ನವರಾತ್ರಿಯ 7ನೇ ದಿನವಾದ ನಿನ್ನೆ ಅರಮನೆಯ ಕನ್ನಡಿ ತೊಟ್ಟಿಯಲ್ಲಿ ಮೈಸೂರು ಮಹಾ ಸಂಸ್ಥಾನದ ವಿದ್ಯಾದೇವಿ ಸರಸ್ವತಿಗೆ ಅಗ್ರ ಪೂಜೆ ಸಲ್ಲಿಸಲಾಯಿತು. ಈ ಹಿನ್ನೆಲೆಯಲ್ಲಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸರಸ್ವತಿಗೆ ಪೂಜೆ ಸಲ್ಲಿಸಿದರು. ಆಯುಧ ಪೂಜೆಗೂ ಮುನ್ನವೇ ಮೈಸೂರು ಅಂಬಾವಿಲಾಸ ಅರಮನೆಯ ಕನ್ನಡಿ ತೊಟ್ಟಿಯಲ್ಲಿ ಮಹಾರಾಜರಿಂದ ಸರಸ್ವತಿ ಪೂಜೆ ನೆರವೇರುತ್ತೆ. ಈ ವೇಳೆ ಶ್ರೀ ದುರ್ಗೆ, ವಾಗ್ದೇವಿ, ವೀಣಾಪಾಣಿ, ಪುಸ್ತಕ ದಾರಿ, ಮಹಾಲಕ್ಷ್ಮಿ, ಮಹಾ ಸರಸ್ವತಿಯ ಅಗ್ರಪೂಜೆ ನವರಾತ್ರಿಯಲ್ಲಿ