ತ್ರಿಷಿಕಾ ಕುಮಾರಿ ತಾಯಿಯಾಗುತ್ತಿರುವ ಬಗ್ಗೆ ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಯದುವೀರದತ್ತ ಕೃಷ್ಣದತ್ತ ಚಾಮರಾಜ ಒಡೆಯರ್ ನಾಚಿ ನೀರಾದ ಘಟನೆ ನಡೆದಿದೆ. ವಿದ್ಯಾರ್ಥಿಗಳೊಂದಿಗೆ ನಡೆದ ಸಭೆಯಲ್ಲಿ ಪತ್ನಿ ತ್ರಿಷಿಕಾ ಕುಮಾರಿ ತಾಯಿಯಾಗುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ನಾಚಿ ನೀರಾಗಿ ಇದು ವೈಯಕ್ತಿಕ ವಿಚಾರ. ಆದರೆ, ತಂದೆಯಾಗುತ್ತಿರುವುದಕ್ಕೆ ಸಂತಸವಾಗಿದೆ ಎಂದರು. ವೈಯಕ್ತಿಕ ವಿಚಾರಗಳನ್ನು ಕೇಳಲು ಯಾರಿಗೂ ಅಧಿಕಾರ ಕೊಟ್ಟಿಲ್ಲ. ಆದ್ದರಿಂದ, ದಯವಿಟ್ಟು ವೈಯಕ್ತಿಕ ವಿಚಾರಗಳನ್ನು ಪ್ರಸ್ತಾಪಿಸಬೇಡಿ ಎಂದು ಮನವಿ ಮಾಡಿದರು.