ರಾಹುಲ್ ಗಾಂಧಿ ಮಾನಸ ಸರೋವರಕ್ಕೆ ಹೋಗಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳುವುದು ಗ್ಯಾರಂಟಿ ಎಂದು ಶಾಸಕ ಭವಿಷ್ಯ ನುಡಿದಿದ್ದಾರೆ. ಸಧ್ಯದಲ್ಲೆ ರಾಜ್ಯ ಸಮ್ಮಿಶ್ರ ಸರ್ಕಾರ ಉರುಳಲಿದೆ ಎಂದು ಮತ್ತೆ ಭವಿಷ್ಯವನ್ನು ಶಾಸಕ ಬಸನಗೌಡ ಪಾಟೀಲ ಯತ್ನಾಳ ನುಡಿದಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನವರಿಗೆ ಶ್ರದ್ಧಾಕೇಂದ್ರಗಳ ಪಾವಿತ್ರ್ಯತೆ ಗೊತ್ತಿಲ್ಲ. ಪವಿತ್ರ ಸ್ಥಾನಗಳಿಗೆ ಭೇಟಿ ನೀಡಿ ಚಿಕನ್ ಸೂಪ್ ತಿಂದರೆ ಹೇಗೇ? ಹೀಗಾಗಿ ರಾಹುಲ್ ಭೇಟಿ ನೆಗಟಿವ್ ಆಗಲಿದೆ ಎಂದು ಹೇಳಿದರು.