ಅರಣ್ಯ ಖಾತೆ ಸಚಿವ ರಮಾನಾಥ್ ರೈಗೆ ಗೃಹ ಸಚಿವ ಖಾತೆ ನೀಡಿದಲ್ಲಿ ಹೋರಾಟ ನಡೆಸುವುದಾಗಿ ಘೋಷಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಇಂದು ಹೋರಾಟದ ರೂಪರೇಷೆ ರೂಪಿಸಿಲು ಬಿಜೆಪಿ ನಾಯಕರು ತುರ್ತುಸಭೆ ಕರೆದಿದ್ದಾರೆ. ನಗರದ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ನಾಯಕರು ತುರ್ತು ಸಭೆಯನ್ನು ಸಂಜೆ ಐದು ಗಂಟೆಗೆ ಕರೆದಿದ್ದಾರೆ. ಸಭೆಯಲ್ಲಿ ಬಿಜೆಪಿಯ ಪ್ರಮುಖ ನಾಯಕರು ಭಾಗಿಯಾಗಲಿದ್ದು, ಮುಂದೆ ಯಾವ ರೀತಿ ಹೋರಾಟ ಹಮ್ಮಿಕೊಳ್ಳಬೇಕು ಎನ್ನುವ ಬಗ್ಗೆ ಸಭೆ ನಿರ್ಧರಿಸಲಿದೆ