ಆಪರೇಶನ್ ಕಮಲ ಮಾಡುವುದಾಗಿ ನಾನು ಹೇಳಿಲ್ಲ. ನಮ್ಮ ನಾಯಕರೂ ಹೇಳಿಲ್ಲ. ಈ ನಿಟ್ಟಿನಲ್ಲಿ ನೀಡಿರುವ ಉಮೇಶ್ ಕತ್ತಿ ಹೇಳಿಕೆ ಸರಿಯಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹೇಳಿದ್ದಾರೆ.ಕಾಂಗ್ರೆಸ್- ಜೆಡಿಎಸ್ ಸರ್ಕಾರ ಕಚ್ಚಾಡಿಕೊಂಡು ಸರಕಾರ ಬಿದ್ದರೆ, ನಾವು ಮುಂದೆ ಯೋಚಿಸುತ್ತೇವೆ. ಯಾವುದೇ ಕಾರಣಕ್ಕೂ ಜೆಡಿಎಸ್, ಕಾಂಗ್ರೆಸ್ ಅಭ್ಯರ್ಥಿಗಳನ್ನು ಸೆಳೆಯುವ ಯತ್ನ ಮಾಡುವುದಿಲ್ಲ. ಪರಸ್ಥಿತಿ ಬಂದಾಗ ರಾಜಕೀಯ ಏರು ಪೇರಾದಾಗ ಕುಳಿತು ಚರ್ಚೆ ಮಾಡುತ್ತೇವೆ. ಒಂದು ವೇಳೆ ಜೆಡಿಎಸ್- ಕಾಂಗ್ರೆಸ್ ನಮ್ಮ ಬಳಿ ಬಂದರೆ?