ಯಡಿಯೂರಪ್ಪ ನಿತ್ಯ ಕನಸು ಕಾಣ್ತಿದ್ದಾರೆ; ಒಬ್ಬ ಶಾಸಕ ಅವ್ರ ಕೈಗೆ ಸಿಗಲ್ಲ

ಬೆಂಗಳೂರು, ಭಾನುವಾರ, 12 ಮೇ 2019 (14:16 IST)

ಸರ್ಕಾರ ರಚನೆ ಮಾಡ್ತೀವಿ ಅಂತಾ ಹೇಳ್ತಾನೇ ಇದಾರೆ. ಪ್ರತಿದಿನ ಕನಸು ಕಾಣ್ತಿದಾರೆ. ಆದರೆ ನಮ್ಮ ಒಬ್ಬ ಶಾಸಕ ಅವರ ಕೈಗೆ ಸಿಗಲ್ಲ. ಹೀಗಂತ ಸಚಿವರೊಬ್ಬರು ಹೇಳಿದ್ದಾರೆ.


ಬೆಂಗಳೂರಿನ ನಿವಾಸದಲ್ಲಿ ಸಚಿವ ಡಿ.ಕೆ. ಶಿವಕುಮಾರ್ ಹೇಳಿಕೆ ನೀಡಿದ್ದಾರೆ.

ನಮ್ಮ ಒಬ್ಬ ಶಾಸಕ ಈಗಾಗಲೇ ಹೋಗಿ ಆಗಿದೆ. ಮತ್ತೆ ಯಾರೂ ಹೋಗುವುದಿಲ್ಲ. ನಾವು ಯಾವ ಬಿಜೆಪಿ  ಶಾಸಕರನ್ನೂ ಸಂಪರ್ಕಿಸಿಲ್ಲ ಎಂದರು.

ಆದರೆ ಬಿಜೆಪಿಯವರು ನಮ್ಮ ಶಾಸಕರನ್ನು ಸಂಪರ್ಕ ಮಾಡಿದ್ದಕ್ಕೆ ನಮ್ಮ ಬಳಿ ಪುರಾವೆ ಇದೆ ಎಂದು ಹೇಳಿದ್ರು.
ಬಿ.ಎಸ್.ಯಡಿಯೂರಪ್ಪ ಗುತ್ತಿಗೆದಾರರು, ಅಧಿಕಾರಿಗಳನ್ನು ಸಂಪರ್ಕಿಸಿ ನಮ್ಮ ಸರ್ಕಾರ ಬರುತ್ತೆ ಅಂತಾ ಆಮಿಷ ಒಡ್ಡುತ್ತಿದ್ದಾರೆ ಅಂತ ಸಚಿವ ಟೀಕೆ ಮಾಡಿದ್ರು.


 
 
 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಮಹಾರಾಷ್ಟ್ರಕ್ಕೆ ಮಣಿದ ಸರಕಾರ; ಕೋಯ್ನಾ ನೀರು ಬರುತ್ತೆ ಎಂದ ಡಿಕೆಶಿ

ಮಹಾರಾಷ್ಟ್ರದ ಒತ್ತಡಕ್ಕೆ ಕೊನೆಗೂ ರಾಜ್ಯ ಸರಕಾರ ಮಣಿದಿದೆ.

news

ಕಾರಜೋಳಗೆ ಖಡಕ್ ವಾರ್ನಿಂಗ್ ನೀಡಿದ ಸಚಿವ

ಬರ ಮರೆತು ರೆಸಾರ್ಟ್ ನಲ್ಲಿದ್ದಾರೆ ಎಂಬ ಬಿಜೆಪಿಯ ಗೋವಿಂದ ಕಾರಜೋಳ ಹೇಳಿಕೆಗೆ ಸಚಿವರು ಖಡಕ್ಕಾಗಿ ಟಾಂಗ್ ...

news

ಯಡಿಯೂರಪ್ಪ 23 ರ ನಂತರ ಸಿಎಂ!

ಕುಂದಗೋಳ ಉಪ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಭಾರಿಸುತ್ತದೆ. ಐದು ವರ್ಷ ದೇಶದಲ್ಲಿ ಮೋದಿ ಮಾಡಿದ ಸಾಧನೆ, ...

news

ಸಿದ್ದರಾಮಯ್ಯ ಸಿಎಂ ಆಗಲೇಬೇಕು ಎಂದೋರಾರು?

ನಾನು ಲೋಕಸಭಾ ಚುನಾವಣೆಯಲ್ಲಿ ನಾನು ತಟಸ್ಥವಾಗಿದ್ದೆ. ಯಾರ ಪರವೂ ನಾನು ಕೆಲಸ ಮಾಡಿಲ್ಲ. ನಾನು ನಮ್ಮ ಪಕ್ಷದ ...