ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನದ್ದು ಹಿಟ್ ಆಂಡ್ ರನ್ ಕೇಸ್ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ. ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆಯಲ್ಲಿ ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಯಡಿಯೂರಪ್ಪನದ್ದು ಕೇವಲ ಆರೋಪ ಮಾಡುವ ಜಾಯಮಾನ ಎಂದು ಏಕವಚನದಲ್ಲಿಯೇ ಲೇವಡಿ ಮಾಡಿದ್ದಾರೆ. ಯಡಿಯೂರಪ್ಪ ಕೇವಲ ಆರೋಪಗಳನ್ನು ಮಾಡುತ್ತಾರೆ. ಆರೋಪಗಳನ್ನು ಸಾಬೀತಪಡಿಸಬೇಕಲ್ಲವೇ? ಕೇವಲ ಆರೋಪಗಳನ್ನು ಮಾಡುವುದರಿಂದ ಯಾವುದೇ ಲಾಭವಿಲ್ಲ ಎಂದು ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ ಪಕ್ಷದ ಹೈಕಮಾಂಡ್ಗೆ