ಮುಸ್ಲಿಂ ಸಂಘಟನೆಗಳ ಸದಸ್ಯರು ಶಾಸಕ ಎಂ.ಪಿ.ರೇಣುಕಾಚಾರ್ಯ ವಿರುದ್ಧ ಭಾರೀ ಆಕ್ರೋಶ ಹೊರಹಾಕಿದ್ದಾರೆ. ಶಾಸಕ ಎಂ.ಪಿ.ರೇಣುಕಾಚಾರ್ಯ ಪ್ರತಿಕೃತಿಗೆ ಮುಸ್ಲಿಂ ಸಂಘಟನೆಗಳ ಸದಸ್ಯರು ಬೆಂಕಿ ಇಟ್ಟು ತಮ್ಮ ಸಿಟ್ಟನ್ನು ಹೊರಹಾಕಿದ್ದಾರೆ. ಮುಸ್ಲಿಂ ಸಮಾಜದ ಜನರು ಹಾಗೂ ಮಸೀದಿ ಕುರಿತು ರೇಣುಕಾಚಾರ್ಯ ಕೀಳಾಗಿ ಮಾತನಾಡಿದ್ದಾರೆ ಅಂತ ಪ್ರತಿಭಟನಾಕಾರರು ಗರಂ ಆಗಿದ್ದಾರೆ. ಶಿವಮೊಗ್ಗದಲ್ಲಿ ಧರಣಿ ನಡೆಸಿದ ಮುಸ್ಲಿಂ ಸಮಾಜದವರು, ರೇಣುಕಾಚಾರ್ಯ ವಿರುದ್ಧ ಸಿಎಂ ಕಠಿಣ ಕ್ರಮ ಕೈಗೊಳ್ಳಬೇಕು ಅಂತ ಆಗ್ರಹ ಮಾಡಿದ್ರು.