ಅಘೋರಿ ಸಾಧುಗಳನ್ನು ಭೇಟಿ ಮಾಡಿದ ಬಿಎಸ್‌ವೈ

ಬೆಂಗಳೂರು| Rajesh patil| Last Modified ಸೋಮವಾರ, 2 ಅಕ್ಟೋಬರ್ 2017 (16:28 IST)
ನಗರದ ಡಾಲರ್ಸ್ ಕಾಲೋನಿಯಲ್ಲಿರುವ ಸ್ವಗೃಹದಲ್ಲಿ ಉತ್ತರ ಭಾರತದ ಅಘೋರಿಗಳನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಭೇಟಿ ಮಾಡಿದ್ದಾರೆ.
ಅಘೋರಿಗಳ ಆಶೀರ್ವಾದ ಪಡೆದಲ್ಲಿ ಇಷ್ಟಾರ್ಥ ಸಿದ್ದಿಯಾಗುತ್ತದೆ ಎನ್ನುವ ನಂಬಿಕೆಯಿಂದ ಅಘೋರಿ ಸಾಧುಗಳನ್ನು ಗುಟ್ಟಾಗಿ ಮನೆಗೆ ಕರೆಸಿಕೊಂಡು ಆಶೀರ್ವಾದ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ಅಘೋರಿಗಳು ಸರ್ವತ್ಯಾಗಿಗಳಾಗಿರುವುದರಿಂದ ಅವರ ಆಶೀರ್ವಾದ ಫಲಿಸುತ್ತದೆ ಎನ್ನುವ ನಂಬಿಕೆಯ ಹಿನ್ನೆಲೆಯಲ್ಲಿ ಅಘೋರಿ ಸಾಧುಗಳನ್ನು ನವರಾತ್ರಿ ಹಬ್ಬದಂದು ಕರೆಸಿಕೊಂಡು ಪೂಜೆ ನೆರವೇರಿಸಿ ಆಶೀರ್ವಾದ ಪಡೆದಿದ್ದಾರೆ ಎನ್ನಲಾಗಿದೆ.
 
 ಅಘೋರಿಗಳ ಮುಂದೆ ತಮ್ಮ ಕೆಲ ಇಷ್ಟಾರ್ಥಗಳನ್ನು ಮಂಡಿಸಿದ ಯಡಿಯೂರಪ್ಪ, ಇಷ್ಟಾರ್ಥ ಸಿದ್ದಿಸುವಂತೆ ಆಶೀರ್ವಾದ ನೀಡಿ ಎಂದು ಕೋರಿದ್ದಾರೆ ಎಂದು ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :