ಯಡಿಯೂರಪ್ಪ ಮನೆ ಮುಂದೆಯೇ ನಡೆಯಿತು ಮಾರಾಮಾರಿ?

ಬೆಂಗಳೂರು, ಶನಿವಾರ, 23 ಮಾರ್ಚ್ 2019 (19:52 IST)

ಲೋಕಸಭೆ ಟಿಕೆಟ್  ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಯಡಿಯೂರಪ್ಪ ಮನೆ ಮುಂದೆಯೇ ಬಿಜೆಪಿ ಮುಖಂಡರ ನಡುವೆ ಮಾರಾಮಾರಿ ನಡೆದಿದೆ.

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ವಿಚಾರಕ್ಕೆ ಸಂಬಂಧಿಸಿದಂತೆ ಗಲಾಟೆ ನಡೆದಿದೆ.
ಸಿ.ಪಿ‌. ಯೋಗೇಶ್ವರ್ ಮತ್ತು ನಿಶಾ ಯೋಗೇಶ್ವರ್ ಗೆ ಟಿಕೆಟ್ ಬೇಡ, ರಾಮನಗರ ಜಿಲ್ಲಾಧ್ಯಕ್ಷ ರುದ್ರೇಶ್ ಗೆ ಟಿಕೆಟ್  ಕೊಡಿ ಅಥವಾ ಕಾರ್ಯಕರ್ತರಿಗೆ ಕೊಡಿ ಎಂದು ಕೆಲವು  ಬಿಜೆಪಿ ಕಾರ್ಯಕರ್ತರಿಂದ ಯಡಿಯೂರಪ್ಪಗೆ ಮನವಿ ಸಲ್ಲಿಸಲಾಯಿತು.
ಯಡಿಯೂರಪ್ಪ ಮನೆಯಿಂದ ಹೊರಬಂದ ವೇಳೆ ಮನವಿ ಮಾಡಿದ ಕಾರ್ಯಕರ್ತರಿಗೆ, ಬಿಎಸ್ವೈ, ನಾನೇನು ಮಾಡಲಪ್ಪ, ಹೈಕಮಾಂಡ್ ನಿರ್ಧಾರ ಮಾಡುತ್ತದೆ ಎಂದು ಹೇಳಿ ಮನೆಯಿಂದ ನಿರ್ಗಮಿಸಿದ್ರು.

ಕಾರ್ಯಕರ್ತರಿಗೆ ಕೊಡಿ, ಕ್ಷೇತ್ರದಲ್ಲಿ ಕಾರ್ಯಕರ್ತರು ಕಷ್ಟಪಡ್ತಿದ್ದಾರೆ ಎಂದ ಕಾರ್ಯಕರ್ತರು ಒತ್ತಾಯ ಮಾಡಿದ್ರು. ಅದರ ನಡುವೆಯೇ ಏನು ಹೇಳಬೇಕೋ ನನಗೆ ಗೊತ್ತಾಗುತ್ತಿಲ್ಲ ಎಂದು ಹೇಳಿ ಮನೆಯಿಂದ ತೆರಳಿದ್ರು ಯಡಿಯೂರಪ್ಪ. ಆಗ ಯಡಿಯೂರಪ್ಪ ತೆರಳಿದ ಬಳಿಕ ಧವಳಗಿರಿ ನಿವಾಸದ ಮುಂದೆ ಅಸಮಾಧಾನ ವ್ಯಕ್ತಪಡಿಸಿದ ಬಿಜೆಪಿ ಕಾರ್ಯಕರ್ತರಲ್ಲೇ ಕಿತ್ತಾಟ ಆರಂಭಗೊಂಡಿತು. ಕೆಲವರು ಕೈ ಕೈಮಿಲಾಯಿಸಿದ ಘಟನೆಯೂ ನಡೆಯಿತು.

ಯೋಗೇಶ್ವರ್ ಬೆಂಬಲಿಗರು ಮತ್ತು ರುದ್ರೇಶ್ ಬೆಂಬಲಿಗರ ನಡುವೆ ಮಾತಿನ ಚಕಮಕಿ, ತಳ್ಳಾಟ ನಡಯಿತು.

ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ರತಿಸುಖ ಹೆಚ್ಚು ಹೊತ್ತು ಅನುಭವಿಸೋದು ಹೇಗೆ?

ಮದುವೆಯಾಗಿ ಐದು ತಿಂಗಳಾಗಿದೆ. ನನಗೆ ಶೀಘ್ರ ಸ್ಖಲನದ ತೊಂದರೆ ಇದೆ. ಶಿಶ್ನ ಬೇಗನೆ ಗಡುಸಾಗುತ್ತದೆ. ಆದರೆ ...

news

ಗರ್ಭಿಣಿ ಹೆಂಡತಿ ಜತೆ ಸರಸ ಸರಿಯೇ?

ನನ್ನ ಪತ್ನಿ ಈಗ ಗರ್ಭವತಿಯಾಗಿದ್ದು ಇದೀಗ ನಾಲ್ಕು ತಿಂಗಳು ತುಂಬುತ್ತಿದೆ. ನನ್ನ ಮಡದಿ ಗರ್ಭವತಿಯಾದಂದಿನಿಂದ ...

news

ಅಧಿಕಾರಿಗಳಿಗೆ ಹಿಗ್ಗಾಮುಗ್ಗಾ ಝಾಡಿಸಿದ ಮಾಜಿ ಸಚಿವ

ಡಿಸಿ, ಎಸಿ ಮುಂಡೆಗಂಡರಿಗೆ ಏನೂ ಗೊತ್ತಾಗೋದಿಲ್ಲ. ಹೀಗಂತ ಅಧಿಕಾರಿಗಳ ವಿರುದ್ಧ ಮಾಜಿ ಸಚಿವ ...

news

ಶ್ರೀನಿವಾಸ್ ಪ್ರಸಾದ್ ನನ್ನ ಗುರುಗಳು ಅಲ್ಲ ಎಂದ ಕಾಂಗ್ರೆಸ್ ಶಾಸಕ ಆರ್.ಧೃವನಾರಾಯಣ್

ಚಾಮರಾಜನಗರ : ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ. ಶ್ರೀನಿವಾಸ್ ಪ್ರಸಾದ್ ನನ್ನ ಗುರುಗಳು ಅಲ್ಲ. ...