ಬೆಂಗಳೂರು : ಶ್ರೀರಾಮುಲು ವಿರುದ್ಧ ಒಂದಾದರೂ ಆರೋಪ ಸಾಬೀತಾಗಿದೆಯಾ ಹೇಳಿ? ದಾಖಲೆ ನೋಡಿರಿ. ಯಡಿಯೂರಪ್ಪಜಿ ವಿರುದ್ಧ ದಾಖಲಿಸಲಾದ ಎಲ್ಲ ಎಫ್ಐಆರ್ಗಳನ್ನು ರದ್ದು ಮಾಡಲಾಗಿದೆ. ಇದರರ್ಥ ನಾನು ಯಾರಿಗೂ ಸರ್ಟಿಫಿಕೇಟ್ ಇಲ್ಲಿ ಕೊಡುತ್ತಿಲ್ಲ. ಆದರೆ ಇದು ಸತ್ಯ! ಹೀಗೆಂದು ಪ್ರತಿಕ್ರಿಯಿಸಿದವರು ಮತ್ತಾರೂ ಅಲ್ಲ, ಭಾರತೀಯ ಜನತಾ ಪಕ್ಷದ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು. ಸಂದರ್ಶನದಲ್ಲಿ, ಕಳಂಕಿತರ ಪಟ್ಟ ಕಟ್ಟಿಕೊಂಡಿದ್ದರೂ ಬಿಜೆಪಿಗೆ ವಾಪಸ್ ಆಗಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ