ಬಿಜೆಪಿ ಪಕ್ಷದ ಯಾವುದೇ ಮಾಹಿತಿ ಸೋರಿಕೆಯಾದರೂ ಕಚೇರಿಯಿಂದ ವಿಮುಕ್ತಿಗೊಳಿಸುವುದಾಗಿ ಕಚೇರಿ ಸಿಬ್ಬಂದಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ. ನಗರದ ಮಲ್ಲೇಶ್ವರಂನಲ್ಲಿರುವ ಕಚೇರಿಯಲ್ಲಿ ಸಿಬ್ಬಂದಿಗಳೊಂದಿಗೆ ಸಭೆ ನಡೆಸಿದ ಬಿಎಸ್ವೈ, ಪಕ್ಷದ ರಣತಂತ್ರದ ಬಗ್ಗೆಯಾಗಲಿ ಅಥವಾ ಪಕ್ಷದ ಕಾರ್ಯಕ್ರಮಗಳ ಬಗ್ಗೆಯಾಗಲಿ ಯಾವುದೇ ಮಾಹಿತಿ ಸೋರಿಕೆಯಾಗಬಾರದು. ಒಂದು ವೇಳೆ ಸೋರಿಕೆಯಾದಲ್ಲಿ ಹೊಣೆಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಗುಡುಗಿದ್ದಾರೆ. ಬಿಜೆಪಿ ಕಚೇರಿ ಸಿಬ್ಬಂದಿಯಿಂದಲೇ ಪಕ್ಷದ ನಾಯಕರ ಮಾಹಿತಿ ಸೋರಿಕೆಯಾಗುತ್ತಿದೆ