ಮುಖ್ಯಮಂತ್ರಿ ಸಿದ್ದರಾಮಯ್ಯ ಶಾಶ್ವತವಾಗಿ ಮುಖ್ಯಮಂತ್ರಿಯಾಗಿ ಇರಲ್ಲ. ಮುಂದೆ ಕಾದಿದೆ ನಿಮಗೆ ಮಾರಿಹಬ್ಬ ಎಂದು ಪೊಲೀಸರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಗುಡುಗಿದ್ದಾರೆ. ಪೊಲೀಸರು ಅನಗತ್ಯವಾಗಿ ಬಿಜೆಪಿ ಮುಖಂಡ ಬೆಂಕಿ ಮಹಾದೇವ್ ತೋಟದ ನಿವಾಸದ ಮೇಲೆ ದಾಳಿ ಮಾಡಿ ಅತಿರೇಕದ ವರ್ತನೆ ತೋರಿದ್ದಾರೆ. ಪೊಲೀಸರ ವರ್ತನೆ ಸಹಿಸಲು ಸಾಧ್ಯವಿಲ್ಲ ಎಂದು ಕಿಡಿಕಾರಿದ್ದಾರೆ. ನಾವು ಈಗಾಗಲೇ ಭ್ರಷ್ಟ ಅಧಿಕಾರಿಗಳ ಪಟ್ಟಿಯನ್ನು ಸಿದ್ದಪಡಿಸುತ್ತಿದ್ದೇವೆ. ನಮ್ಮ ಸರಕಾರ ಅಧಿಕಾರಕ್ಕೆ ಬಂದ ನಂತರ ಇಂತಹ ಅಧಿಕಾರಿಗಳಿಗೆ