ಬೆಂಗಳೂರು : ಅನರ್ಹ ಶಾಸಕರ ಗೋಳು ಕೇಳಿ ಸಿಎಂ ಬಿ.ಎಸ್. ಯಡಿಯೂರಪ್ಪ ಕಣ್ಣೀರು ಹಾಕಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ದೆಹಲಿಯಲ್ಲಿ ಸಿಎಂ ಯಡಿಯೂರಪ್ಪ ಅವರನ್ನ ಭೇಟಿ ಮಾಡಿದ ಅನರ್ಹ ಶಾಸಕ ಮುನಿರತ್ನ, ಅನರ್ಹ ಶಾಸಕರು ನಾವು ಸದ್ಯ ಅತಂತ್ರರಾಗಿದ್ದೇವೆ. ಬಿಜೆಪಿ ಸರ್ಕಾರ ರಚನೆಗೆ ನಮ್ಮ ಭವಿಷ್ಯವನ್ನೇ ಅಡವಿಟ್ಟಿದ್ದೇವೆ. ರಾಜೀನಾಮೆ ನೀಡಿದ್ದರಿಂದ ನಮ್ಮ ಭವಿಷ್ಯ ಅತಂತ್ರವಾಗಿದೆ. ನಮ್ಮ ಕಣ್ಣೀರಿನ ಮೇಲೆ ಸರ್ಕಾರ ಮಾಡಿದ್ದೀರಿ, ನಮ್ಮನ್ನ ಕಣ್ಣೀರು ಹಾಕಿಸಿದ್ರೆ ಸರ್ಕಾರ ಹೆಚ್ಚು ಕಾಲ ಉಳಿಯಲ್ಲ.