ನಿನ್ನೆ ನಡೆದಿದ್ದ ಕಹಿ ಘಟನೆ ಮರೆಯುವ ಮುನ್ನವೇ ಅಂಥದ್ದೆ ಮತ್ತೊಂದು ಘಟನೆ ಮರುಕಳಿಸಿದ್ದು, ಜನರು ಹೈರಾಣಾಗುವಂತೆ ಮಾಡಿದೆ.ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ಸರಣಿ ಕಳ್ಳತನ ನಿನ್ನ ನಡೆದಿತ್ತು. ಅದು ಮುಗಿದ ಈಗ ದೇವರಹಿಪ್ಪರಗಿಗೆ ಎಂಟ್ರಿಕೊಟ್ಟಿದ್ದಾರೆ ಖದೀಮರು. ದೇವರಹಿಪ್ಪರಗಿಯಲ್ಲಿ ಮುಂದುವರಿದಿದೆ ಕಳ್ಳರ ಕೈಚಳಕ. 8 ಮನೆ ಹಾಗೂ 2 ಅಂಗಡಿಗಳನ್ನ ಒಡೆದು ಅಪಾರ ಪ್ರಮಾಣದ ಚಿನ್ನ ಹಾಗೂ ನಗದು ದೋಚಿ ಪರಾರಿಯಾಗಿದ್ದಾರೆ. ಬೇಸಿಗೆಯ ಝಳಕ್ಕೆ ಮಹಡಿಯ ಮೇಲೆ ಮಲಗಿದ್ದಾಗ ತಡರಾತ್ರಿ ಬಾಗಿಲು ಮುರಿದು ಕಳ್ಳತನ ಮಾಡಲಾಗಿದೆ.