ಬೆಂಗಳೂರು : ಮುಂದಿನ ಶೈಕ್ಷಣಿಕ ವರ್ಷದಿಂದ ರಾಜ್ಯದ ಶಾಲೆ, ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಯೋಗ ಶಿಕ್ಷಣ ಹಾಗೂ ಯೋಗಾಭ್ಯಾಸ ಪ್ರಾರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.ಭಾನುವಾರ ನಗರದ ಹೊರವಲಯದ ಜಿಗಣಿ ಬಳಿಯ ಪ್ರಶಾಂತಿ ಕುಟೀರಂನಲ್ಲಿ ‘ಎಸ್. ವ್ಯಾಸ ಸ್ವಾಯತ್ತ ವಿಶ್ವವಿದ್ಯಾಲಯ’ ಭಾನುವಾರ ಆಯೋಜಿಸಿದ್ದ ಯೋಗ ಸಂಶೋಧನೆ ಕುರಿತ 24ನೇ ಅಂತಾರಾಷ್ಟ್ರೀಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.‘ನಮ್ಮ ರಾಜ್ಯದಲ್ಲೂ ಯೋಗದ ಬಗ್ಗೆ ಯೋಗಾಭ್ಯಾಸದ ಪ್ರಯೋಜನಗಳ ಬಗ್ಗೆ