ಶಿವಮೊಗ್ಗ : 10 ರೂಪಾಯಿ ಕೋಳಿ ಮರಿಗೆ ಕೆಎಸ್ಆರ್ಟಿಸಿ ಬಸ್ಸಿನ ನಿರ್ವಾಹಕರೊಬ್ಬರು 52 ರೂಪಾಯಿಗೆ ಅರ್ಧ ಟಿಕೆಟ್ ನೀಡಿದ್ದಾರೆ.ಅಲೆಮಾರಿ ಕುಟುಂಬವೊಂದು ಶಿರಸಿಯಲ್ಲಿ 10 ರೂಪಾಯಿ ನೀಡಿ ಕೋಳಿ ಮರಿ ಖರೀದಿಸಿತ್ತು. ಶಿರಸಿಯಿಂದ ಹೊಸನಗರಕ್ಕೆ ಖಾಸಗಿ ಬಸ್ಸಿನಲ್ಲಿ ಬಂದಿಳಿದ ಅಲೆಮಾರಿ ಕುಟುಂಬ, ಹೊಸನಗರದಿಂದ ಶಿರೂರಿಗೆ ಕೆಎಸ್ಆರ್ಟಿಸಿ ಬಸ್ಸಿನಲ್ಲಿ ಪ್ರಯಾಣ ಬೆಳೆಸಿತ್ತು. ಈ ವೇಳೆ ಬಸ್ ನಿರ್ವಾಹಕರು ಕೋಳಿ ಮರಿಗೂ ಟಿಕೆಟ್ ಖರೀದಿಸಬೇಕು ಎಂದು ತಿಳಿಸಿದ್ದಾರೆ. ಹೀಗಾಗಿ ಅಲೆಮಾರಿ ಕುಟುಂಬ ಕೋಳಿ ಮರಿಗಾಗಿ 52