ಕಪ್ಪು ಕೋತಿಗೆ ಗುಂಡಿಕ್ಕಿ ಕೊಂದು ಬಿಡಬೇಕು. ಹೀಗಂತ ಆಗ್ರಹಿಸಿ ಜನರು ಲಾಕ್ ಡೌನ್ ನಡುವೆ ಪ್ರತಿಭಟನೆಗೆ ಇಳಿದಿದ್ದಾರೆ.ಕಳೆದ ಹದಿನೈದು ದಿನಗಳಿಂದ ಕಪ್ಪು ಕೋತಿ(ಮುಸ್ಯಾ) ಒಂದು ಜನರನ್ನು ಕಚ್ಚುತ್ತಲೇ ಇದೆ. ಅದರಲ್ಲಿಯೂ ಹೊಲ-ಗದ್ದೆಗಳಲ್ಲಿ ಕೆಲಸ ಮಾಡುತ್ತಿರುವ ರೈತರಿಗೆ ಹೆಚ್ಚಾಗಿ ಕಚ್ಚಿ ಪರಾರಿಯಾಗುತ್ತಿದೆ.ಬಾಗಲಕೋಟೆ ಜಿಲ್ಲೆ ಬಾದಾಮಿಯ ಕಬ್ಬಲಗೇರಿ, ಬಾದಾಮಿ, ಕೇರ್ ಓಣಿ ನಿವಾಸಿಗಳಂತೂ ಕಪ್ಪು ಕೋತಿ ಕಚ್ಚಾಟಕ್ಕೆ ರೋಸಿ ಹೋಗಿದ್ದಾರೆ.ಕೋತಿಯನ್ನು ಹಿಡಿದು ಬೇರೆ ಕಡೆ ಸಾಗಿಸಿ ಇಲ್ಲವೇ ಅದಕ್ಕೆ ಗುಂಡಿಕ್ಕಿ ಕೊಂದುಬಿಡಿ ಅಂತ