Widgets Magazine

ಪ್ರೇಮಿಗಳ ದಿನದಂದೇ ಜೀವ ಕಳೆದುಕೊಂಡ ಯುವ ಜೋಡಿ

ಮಡಿಕೇರಿ| Jagadeesh| Last Modified ಶುಕ್ರವಾರ, 14 ಫೆಬ್ರವರಿ 2020 (20:28 IST)
ಯುವ ಜೋಡಿಯೊಂದು ಪ್ರೇಮಿಗಳ ದಿನದಂದೇ ಜೊತೆಯಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸಚಿನ್ (26), ಸಿಂಧುಶ್ರೀ (20) ಯುವ ಪ್ರೇಮಿಗಳಾಗಿದ್ದು, ಕೊಡಗು ಜಿಲ್ಲೆಯ ಸೋಮವಾರ ಪೇಟೆಯ ಹಾರಂಗಿ ಜಲಾಶಯಕ್ಕೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಪ್ರೇಮಿಗಳು ನಾಲ್ಕೈದು ವರ್ಷಗಳಿಂದ ಪ್ರೀತಿ ಮಾಡ್ತಿದ್ರು. ಆದರೆ ಮನೆಯಲ್ಲಿ ಇವರ ಪ್ರೀತಿಗೆ ವಿರೋಧ ವ್ಯಕ್ತವಾಗಿತ್ತು. ಹೀಗಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.

ಮೃತ ಜೋಡಿಯ ಶವವನ್ನು ಪೊಲೀಸರು ಹೊರತೆಗೆದಿದ್ದಾರೆ.  

 

ಇದರಲ್ಲಿ ಇನ್ನಷ್ಟು ಓದಿ :