ಆಕೆ ಇನ್ನು ಹರಿಹರೆಯದ ಯುವತಿ. ಜೀವನ ನೋಡುವುದು ಬಹಳಷ್ಟಿತ್ತು. ಆದರೆ ಆಕೆಗೆ ಅಂಟಿದ ವ್ಯಸನ ಆಕೆಯ ಬಾಳನ್ನೇ ನಾಶ ಮಾಡಿದೆ. ಮಹಾರಾಷ್ಟ್ರದ ನಾಗಪುರದಲ್ಲಿ ಓರ್ವ ಹದಿಹರೆಯದ ಬಾಲಕಿಯ ಆತ್ಮಹತ್ಯೆ ಪ್ರಕರಣ ಹೊಸ ಟ್ವಿಸ್ಟ್ ಪಡೆದುಕೊಂಡಿದೆ. ಅಂತರ್ಜಾಲ ಆಟದ ವ್ಯಸನದ ದುಷ್ಪರಿಣಾಮದಿಂದ ಯುವತಿ ಆತ್ಮಹತ್ಯೆ ಆಗಿರಬಹುದು ಎಂದು ಪೊಲೀಸರು ಶಂಕಿಸಿದ್ದು, ಆ ನಿಟ್ಟಿನಲ್ಲಿ ತನಿಖೆ ಕೈಗೊಂಡಿದ್ದಾರೆ.ನಾಗಪುರದ ಬೆಲ್ತರೋಡಿ ಪ್ರದೇಶದಲ್ಲಿನ ತನ್ನ ಮನೆಯಲ್ಲಿ 17 ವರ್ಷದ ಈ ಬಾಲಕಿ ನೇಣು ಬಿಗಿದುಕೊಂಡು ಮೃತಪಟ್ಟಿದ್ದು,