ನಾನು ಡಿಗ್ರಿ ಪೂರ್ಣ ಮಾಡಬೇಕು. ಆವಾಗ್ಲೇ ಮದುವೆ ಮಾಡಿ ಅಂತ ಯುವತಿ ಹೇಳಿದ ಮಾತನ್ನು ಪೋಷಕರು ಕೇಳಲೇ ಇಲ್ಲ. ಡಿಗ್ರಿ ಓದುತ್ತಿದ್ದ ಯುವತಿ ಇದೀಗ ಬಾರದ ಲೋಕಕ್ಕೆ ತೆರಳಿದ್ದಾಳೆ. ಮದುವೆ ಇಷ್ಟವಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡಿದ್ದ 19 ವರ್ಷದ ಯುವತಿ ಭಾರತಿ ಮನೆಯಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಆಂಧ್ರದ ಶ್ರೀಕಾಕುಲಂನಲ್ಲಿ ಘಟನೆ ನಡೆದಿದ್ದು, ಮಗಳ ಮದುವೆಯನ್ನು ಆತುರವಾಗಿ ಮಾಡಿ ಮುಗಿಸಬೇಕೆಂದಿದ್ದ ಪೋಷಕರು ಇದೀಗ ಸಿಡಿಲು ಬಡಿದಂತೆ ಮಗಳನ್ನು ಕಳೆದುಕೊಂಡು ಕುಳಿತಿದ್ದಾರೆ. ರಾಮಯ್ಯ