ಜೀವಂತ ಹಾವಿನ ಸಮೇತ ಟೀ ಕುಡಿಯಲು ಬಂದ ಯುವಕ ಎಲ್ಲರ ಕುತೂಹಲಕ್ಕೆ ಕೆಲಕಾಲ ಕಾರಣನಾಗಿದ್ದಾನೆ. ಯುವಕನ ಕೈಯಲ್ಲಿ ಹಾವು ಕಂಡು ಸಾರ್ವಜನಿಕರು ಕಕ್ಕಾಬಿಕ್ಕಿಯಾದ ಘಟನೆ ನಡೆದಿದೆ. ವಿಜಯಪುರ ನಗರದ ರಜಪೂತ ಗಲ್ಲಿ ಬಳಿ ಈ ಘಟನೆ ನಡೆದಿದೆ. ಶೇಖರ್ ಎಂಬಾತನೇ ಹಾವು ಹಿಡಿದುಕೊಂಡು ಟೀ ಕುಡಿಯಲು ಬಂದ ಯುವಕನಾಗಿದ್ದಾನೆ. ರಜಪೂತ ಗಲ್ಲಿಯ ಮನೆಯೊಂದರಲ್ಲಿ ಕೇರೆ ಹಾವು ಕಾಣಿಸಿಕೊಂಡಿತ್ತು. ಅಲ್ಲಿನ ಹಾವು ಹಿಡಿದುಕೊಂಡು ನೇರವಾಗಿ ಟೀ ಶಾಫ್ ಗೆ ಶೇಖರ್ ಬಂದಿದ್ದ.