ಬೆಂಗಳೂರು: ರಸ್ತೆ ದಾಟುವ ವೇಳೆ ಯುವತಿಗೆ ಕ್ಯಾಂಟರ್ ಡಿಕ್ಕಿ ಯುವತಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ನೇತ್ರದಾನ (Eye Donate) ಮಾಡಿ ಸಾವಿನಲ್ಲೂ ಯುವತಿ ಹಿಮಾದ್ರಿ(23) ಸಾರ್ಥಕತೆ ಮೆರೆದಿದ್ದಾಳೆ. ಶುಕ್ರವಾರ ಪೀಣ್ಯ ಮೆಟ್ರೋ ನಿಲ್ದಾಣ ಸಮೀಪ ರಸ್ತೆ ದಾಟುವಾಗ ಕ್ಯಾಂಟರ್ ಗುದ್ದಿತ್ತು. ತೀವ್ರ ರಕ್ತಸ್ರಾವವಾಗಿದ್ದ ಕಾರಣ ಚಿಕಿತ್ಸೆ ಫಲಿಸದೇ ಹಿಮಾದ್ರಿ ಕೊನೆಯುಸಿರೆಳೆದಿದ್ದರು. ಹೆಸರಘಟ್ಟ ರಸ್ತೆಯ ಸೋಲದೇವನಹಳ್ಳಿಯಲ್ಲಿ ಕುಟುಂಬ ವಾಸವಿದ್ದು, ಪೋಷಕರು ಒಮ್ಮತದ ತೀರ್ಮಾನ ಮಾಡಿ ಹಿಮಾದ್ರಿಯ ನೇತ್ರಗಳನ್ನು ದಾನ ಮಾಡಿದ್ದಾರೆ. ಪೀಣ್ಯಾ