ಬೆಂಗಳೂರು: ಪದಾಧಿಕಾರಿಗಳ ಆಯ್ಕೆ ವಿಚಾರ ಆಯ್ತು, ಯೂತ್ ಕಾಂಗ್ರೆಸ್ ಗಲಾಟೆ ಆಯ್ತು. ಇದೀಗ ವಲಸೆ ನಾಯಕರ ವಿಚಾರವಾಗಿ ಟಗರು-ಬಂಡೆ ನಡುವೆ ವಾರ್ ಶುರುವಾದಂತಿದೆ. ಮೈತ್ರಿ ಸರ್ಕಾರವನ್ನ ಕೆಡವಿ ಹೋಗಿದ್ದವರಿಗೆ ಡಿ.ಕೆ ಶಿವಕುಮಾರ್ ಮತ್ತೆ ಗಾಳ ಹಾಕಿದ್ದಾರೆ. ಅದಕ್ಕೆ ಸಿದ್ದರಾಮಯ್ಯ ಡಿಚ್ಚಿ ಕೊಟ್ಟಿದ್ದಾರೆ.ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನ ಕೆಡವಿದವರ ಮೇಲೆ ಡಿ.ಕೆ ಶಿವಕುಮಾರ್ಗೆ ಇದ್ದಕ್ಕಿದ್ದಂತೆ ಪ್ರೀತಿ ಹುಟ್ಟಿದಂತಿದೆ. ಕಾಂಗ್ರೆಸ್ ಪಕ್ಷದ ಮೇಲೆ ನಂಬಿಕೆ ಇರೋರು ಯಾರ್ ಬೇಕಾದ್ರೂ ಪಕ್ಷಕ್ಕೆ ಬರಬಹುದು. ಅರ್ಜಿ ಹಾಕಿದ್ಮೇಲೆ