ಬೆಂಗಳೂರು: ಸೆಲ್ಫಿ ಕ್ರೇಜ್ ಜನರನ್ನು ಏನಲ್ಲ ಅಪಾಯಕ್ಕೆ ದೂಡುತ್ತದೆ ಎಂಬುದಕ್ಕೆ ಈ ಘಟನೆ ಸಾಕ್ಷಿ. ಗಜರಾಜನೊದಿಗೆ ಸೆಲ್ಪಿ ತೆಗೆದುಕೊಳ್ಳಲು ಹೋಗಿ ಆನೆ ತಿವಿದು ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ನಡೆದಿದೆ. ಬಿಎಂಟಿಸಿ ಕಂಡೆಕ್ಟರ್ ವೊಬ್ಬರ ಪುತ್ರ ಅಭಿಲಾಷ್ ವಿ ಮೃತ ವ್ಯಕ್ತಿ ಎಂದು ತಿಳಿದುಬಂದಿದೆ. ಉದ್ಯಾನವನದಲ್ಲಿ ಅಭಿಲಾಷ್ ತನ್ನ ಸ್ನೇಹಿತರೊಂದಿಗೆ ಆನೆ ಪಕ್ಕದಲ್ಲಿ ನಿಂತು ಸೆಲ್ಫಿ ತೆಗೆದುಕೊಳ್ಳುತ್ತಿರುವಾಗ ಸುಂದರ್ ಎಂಬ ಆನೆ ಉದ್ರೇಕಗೊಂಡಿದೆ. ರೊಚ್ಚಿಗೆದ್ದ