ಅರಸೀಕೆರೆ: ಬಾಡೂಟಕ್ಕೆ ಕರೆಯದ ಕೋಪಕ್ಕೆ ಎರಡು ಗುಂಪುಗಳ ನಡುವೆ ನಡೆದ ಜಗಳ ತಾರಕಕ್ಕೇರಿ ಓರ್ವನ ಕೊಲೆಯಲ್ಲಿ ಅಂತ್ಯವಾಗಿದೆ. ಅರಸಿಕೆರೆಯ ಪುರ್ಲೆಹಳ್ಳಿಯಲ್ಲಿ ಇಂತಹದ್ದೊಂದು ದುರಂತ ಸಂಭವಿಸಿದೆ.ದೇವರ ಹರಕೆ ನಿಮಿತ್ತ ಗ್ರಾಮದಲ್ಲಿ ಬಾಡೂಟ ಏರ್ಪಾಟಾಗಿತ್ತು. ಈ ಕಾರ್ಯಕ್ರಮಕ್ಕೆ ಮೃತ ಯುವಕ ಮತ್ತು ಕುಟುಂಬದವರು ತೆರಳಿದ್ದರು. ಆದರೆ ಆರೋಪಿಯನ್ನು ಆಹ್ವಾನಿಸಿರಲಿಲ್ಲ.ಇದೇ ವಿಚಾರವಾಗಿ ಕೊಲೆಗೀಡಾದ ಯುವಕ ಮತ್ತು ಆರೋಪಿ ನಡುವೆ ಜಗಳವಾಗಿದೆ. ಇದೇ ವಿಚಾರವಾಗಿ ಆರೋಪಿ ಸ್ನೇಹಿತರ ಸಹಾಯದೊಂದಿಗೆ ಯುವಕ ಮತ್ತು ಕುಟುಂಬಸ್ಥರ ಮೇಲೆ ಮಾರಕಾಯುಧಗಳಿಂದ