ಬೆಂಗಳೂರು: ಒಂದೇ ಹುಡುಗಿಯನ್ನು ಇಬ್ಬರು ಲವ್ ಮಾಡುತ್ತಿದ್ದರು. ಕೊನೆಗೆ ಇಬ್ಬರಿಗೂ ಜಗಳವಾಗಿ ಓರ್ವ ಕೊಲೆಯಾಗಿದ್ದಾನೆ. ಈಗ ಆರೋಪಿಯ ಬಂಧನವೂ ಆಗಿದೆ.ಕೆಜಿ ಹಳ್ಳಿಯ ಇಬ್ಬರು ಯುವಕರು ಒಬ್ಬಳೇ ಹುಡುಗಿಯನ್ನು ಲವ್ ಮಾಡುತ್ತಿದ್ದರು. ಆಕೆಯನ್ನು ಒಲಿಸಿಕೊಳ್ಳುವ ವಿಚಾರದಲ್ಲಿ ಇಬ್ಬರೂ ಪೈಪೋಟಿಗಿಳಿದಿದ್ದರು. ಇಬ್ಬರೂ ಪರಸ್ಪರ ಕೈ ಕೈ ಮಿಲಾಯಿಸುತ್ತಿದ್ದರು.ಇದೇ ಜಗಳ ತಾರಕಕ್ಕೇರಿ ಒಬ್ಬ ಯುವಕನ ಮೇಲೆ ಇನ್ನೊಬ್ಬ ಯುವಕ ತನ್ನ ಸಹಚರರೊಂದಿಗೆ ದಾಳಿ ಮಾಡಿದ್ದಾನೆ. ಬಳಿಕ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.