ಒಂದೇ ದೇಶ ಒಂದೇ ಮೋದಿ ಎನ್ನುವ ಕಾಲ ಬರುತ್ತದೆ ಎಚ್ಚರವಾಗಿರಿ ಎಂದು ಜೆಡಿಎಸ್ ಮುಖಂಡ ವೈಎಸ್ವಿ ದತ್ತಾ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಜಯಪ್ರಕಾಶ್ ನಾರಾಯಣ್ ಜನ್ಮದಿನಾಚರಣೆ ಅಂಗವಾಗಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇದೀಗ ಆಹಾರದ ಮೇಲೆ ತುರ್ತುಪರಿಸ್ಥಿತಿಯಿದೆ. ಮುಂದೆ ರಾಜಕೀಯದಲ್ಲಿ ತುರ್ತುಪರಿಸ್ಥಿತಿ ಬರಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿಯಾದಂತೆ ನಾನೇ ಪ್ರಧಾನಿ ನಂದೇ ಪಕ್ಷ ಎನ್ನುವಂತೆ ವರ್ತಿಸಿದ್ದರು. ಪ್ರಧಾನಿ ಮೋದಿ