ಬೆಂಗಳೂರು: ಮಾಜಿ ಸಿಎಂ ಕುಮಾರಸ್ವಾಮಿಯವರನ್ನು ವರ್ಣದ ಹೆಸರಿನಲ್ಲಿ ಕರೆದು ವಿವಾದಕ್ಕೀಡಾಗಿರುವ ಕಾಂಗ್ರೆಸ್ ಶಾಸಕ ಜಮೀರ್ ಅಹಮ್ಮದ್ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.‘ನನ್ನ ಹೇಳಿಕೆ ವಿರೋಧಿಸಿ ಕೆಲವರು ನಿನ್ನೆ ನಮ್ಮ ಮನೆಯ ಎದುರು ಪ್ರತಿಭಟನೆ ನಡೆಸಿದ್ದರು. ಆದರೆ ನಾನು ಕುಮಾರಸ್ವಾಮಿಯವರನ್ನು ಕರಿಯಾ ಅಂತಾನೇ ಕರಿಯೋದು. ಅವರು ಬೆಳ್ಳಗಿದ್ದರೆ ಹಾಗೆ ಹೇಳುತ್ತಿರಲಿಲ್ಲ. ನಾನು ಕುಳ್ಳಗಿದ್ದೇನೆ. ಅದಕ್ಕೆ ನಾನು ಕುಳ್ಳ. ದೇವರು ಯಾರು ಯಾರನ್ನು ಯಾವ ಯಾವ ರೀತಿ ಸೃಷ್ಟಿಸಿದ್ದಾನೋ ಅದಕ್ಕೆ ತಕ್ಕ ಹಾಗೆ ಇದ್ದೇವೆ’