ಬೆಂಗಳೂರು: ವಿಶ್ವಾಸ ಮತ ಪ್ರಕ್ರಿಯೆಯಲ್ಲಿ ಗೆದ್ದ ತಕ್ಷಣವೇ ಸದನ ಕಲಾಪ ಮುಂದೂಡಲಾಯಿತು. ಈ ಸಂದರ್ಭದಲ್ಲಿ ಸಿಎಂ ಕುಮಾರಸ್ವಾಮಿಗೆ ಶಾಸಕರಿಂದ ಅಭಿನಂದನೆ ನಡೆಯುತ್ತಿತ್ತು.ಜೆಡಿಎಸ್ ಮತ್ತು ಕಾಂಗ್ರೆಸ್ ಶಾಸಕರು ಗುಂಪಾಗಿ ಬಂದು ಕುಮಾರಸ್ವಾಮಿಯವರ ಕೈಕುಲುಕಿ ಅಭಿನಂದನೆ ಸಲ್ಲಿಸುತ್ತಿದ್ದರು. ಈ ಸಂದರ್ಭದಲ್ಲಿ ಹಳೆಯ ದೋಸ್ತಿ, ಮತ್ತೆ ವಿರೋಧಿಗಳಾಗಿದ್ದ ಜಮೀರ್ ಅಹಮ್ಮದ್ ಕೂಡಾ ಕುಮಾರಸ್ವಾಮಿ ಬಳಿ ಬಂದರು.ಕುಮಾರಸ್ವಾಮಿಯವರ ಕೈಕುಲುಕಿ ಜಮೀರ್ ಅಹಮ್ಮದ್ ಶುಭ ಹಾರೈಸುತ್ತಿದ್ದಂತೆ, ಕುಮಾರಸ್ವಾಮಿ ವಿಶೇಷವಾಗಿ ಜಮೀರ್ ಗೆ ಕೆನ್ನೆ ತಟ್ಟಿ ನಕ್ಕು ಕಳುಹಿಸಿಕೊಟ್ಟರು.