ಬೆಂಗಳೂರು: ಧರ್ಮಸ್ಥಳದ ಪ್ರಕೃತಿ ಚಿಕಿತ್ಸಾ ಕೇಂದ್ರ ಶಾಂತಿವನದಲ್ಲಿ ವಿಶ್ರಾಂತಿ ಪಡೆಯುತ್ತಿರುವ ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿಗೆ ಕಾಂಗ್ರೆಸ್ ನಾಯಕರ ದಂಡು ದಿನೇ ದಿನೇ ಬರುತ್ತಿದೆ.ರಾಜ್ಯ ರಾಜಕಾರಣದ ಬಗ್ಗೆ ಚರ್ಚಿಸಲು ಸಿದ್ದರಾಮಯ್ಯ ಭೇಟಿಗಾಗಿ ನಿನ್ನೆ ಕಾಂಗ್ರೆಸ್ ನ ಹಲವಾರು ನಾಯಕರು ಇಲ್ಲಿಗೆ ಬಂದಿದ್ದರು. ಇಂದು ಸಚಿವ ಜಮೀರ್ ಅಹಮ್ಮದ್ ಖಾನ್ ಆಗಮಿಸಲಿದ್ದರು.ಆದರೆ ಸಕಲೇಶಪುರದವರೆಗೆ ಹೆಲಿಕಾಪ್ಟರ್ ನಲ್ಲಿ ಬಂದ ಅವರಿಗೆ ನಂತರ ಹವಾಮಾನ ಕೈಕೊಟ್ಟಿದ್ದರಿಂದ ಮುಂದುವರಿಯಲಾಗಲಿಲ್ಲ. ಈ ಕಾರಣಕ್ಕೆ ಮರಳಿ ಬೆಂಗಳೂರಿನತ್ತ ಪ್ರಯಾಣಿಸಿದ್ದಾರೆ.