ಸಿಎಂ ಸಿದ್ದರಾಮಯ್ಯರನ್ನು ಹೊಗಳುವ ಭರದಲ್ಲಿ ಬಂಡಾಯ ಜೆಡಿಎಸ್ ಮುಖಂಡ ಜಮೀರ್ ಅಹ್ಮದ್ ನೀಡಿದ ಹೇಳಿಕೆ ನೆರೆದಿದ್ದ ಜನರಲ್ಲಿ ನಗೆಯ ಅಲೆ ಎಬ್ಬಿಸಿತು. ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ನಂತರ ಹಲವಾರು ಭಾಗ್ಯಗಳನ್ನು ಜನತೆಗೆ ನೀಡಿದ್ದಾರೆ. ಕ್ಷೀರ ಭಾಗ್ಯವಾಗಲಿ, ಶೀಲ ಭಾಗ್ಯವಾಗಲಿ ಇನ್ನು ಅನೇಕ ಭಾಗ್ಯಗಳನ್ನು ನೀಡಿದ್ದಾರೆ ಎಂದು ನೆರೆದಿದ್ದ ಜನತೆಯ ನಗುವಿಗೆ ಕಾರಣರಾದರು. ಸಿಎಂ ಸಿದ್ದರಾಮಯ್ಯಗೆ ಯಾರೂ ಟಿಪ್ಪು ಜಯಂತಿ ಮಾಡುವಂತೆ