ಹೃದಯ ಸಂಬಂಧಿ ಚಿಕಿತ್ಸೆಗಾಗಿ ಹಾಸನದಿಂದ 4 ದಿನದ ಗಂಡು ಮಗುವನ್ನು ಬೆಂಗಳೂರಿಗೆ ಕರೆದುಕೊಂಡು ಬರಲಾಗುತ್ತಿದೆ. ಆಂಬ್ಯುಲೆನ್ಸ್ ಸಾಗಲು ಝಿರೋ ಟ್ರಾಫಿಕ್ ವ್ಯವಸ್ಥೆಯನ್ನು ಮಾಡಲಾಗಿದೆ. ಹಾಸನದ ವೈದ್ಯಕೀಯ ಆಸ್ಪತ್ರೆಯಿಂದ ಬೆಂಗಳೂರಿನ ಇಂದಿರಾಗಾಂಧಿ ಆಸ್ಪತ್ರೆಗೆ ನಾಲ್ಕು ದಿನದ ಮಗುವನ್ನು ಕರೆದುಕೊಂಡು ಬರಲಾಗುತ್ತಿದೆ. ವೈದ್ಯರು, ನರ್ಸ್, ಮಗು ಇರುವ ಆಂಬ್ಯುಲೆನ್ಸ್ ಅನ್ನು ಹಾಸನ ಮೂಲದ ಮಧುಸೂದನ್ ಚಾಲನೆ ಮಾಡುತ್ತಿದ್ದಾರೆ. ಮಗು ಇರುವ ಆಂಬ್ಯುಲೆನ್ಸ್ ಹಾಸನದಿಂದ ಹೊರಟಿದ್ದು, ಚನ್ನರಾಯಪಟ್ಟಣ, ಕುಣಿಗಲ್ ಮಾರ್ಗವಾಗಿ ಬೆಂಗಳೂರು ತಲುಪಲಿದೆ. ಹೃದಯ