ರಾಯಚೂರು : ರಾಜ್ಯದಲ್ಲೇ ಮೊದಲ ಪ್ರಕರಣವಾಗಿ ರಾಯಚೂರಿನಲ್ಲಿ ಝಿಕಾ ವೈರಸ್ ಪತ್ತೆಯಾದ ಹಿನ್ನೆಲೆ ಜಿಲ್ಲೆಯಲ್ಲಿ ಚಿಕ್ಕಮಕ್ಕಳ ಪೋಷಕರು ಆತಂಕದಲ್ಲಿದ್ದಾರೆ. ಜಿಲ್ಲೆಯಲ್ಲಿ ಈಗ ಯಾವುದೇ ಮಕ್ಕಳ ಆಸ್ಪತ್ರೆಯನ್ನು ನೋಡಿದರೂ ತುಂಬಿ ತುಳುಕುತ್ತಿವೆ.ಝಿಕಾ ವೈರಸ್ ಆತಂಕದಲ್ಲಿ ಸಣ್ಣ ಜ್ವರಕ್ಕೂ ಪೋಷಕರು ಮಕ್ಕಳನ್ನು ಆಸ್ಪತ್ರೆಗೆ ಕರೆದುಕೊಂಡು ಬರುತ್ತಿದ್ದಾರೆ. ಜ್ವರ ಬಂದರೂ ಡೆಂಗ್ಯೂ ಲಕ್ಷಣಗಳ ಅನುಮಾನಕ್ಕೆ ಆಸ್ಪತ್ರೆಗೆ ಬರುತ್ತಿದ್ದಾರೆ. ಚಂಡಮಾರುತದ ಪರಿಣಾಮ ವಾತಾವರಣ ಬದಲಾಗಿರುವುದರಿಂದಲೂ ಮಕ್ಕಳಲ್ಲಿ ಜ್ವರ, ನೆಗಡಿಯಂತ ಸಾಮಾನ್ಯ ರೋಗಗಳು ಹೆಚ್ಚಾಗಿವೆ.ಜಿಲ್ಲೆಯ ಮಾನ್ವಿ ತಾಲೂಕಿನ