ವಾರಣಾಸಿ ಅಥವಾ ಕಾಶಿ ಎಂದೊಡನೆ ನಮಗೆ ನೆನಪಿಗೆ ಬರುವುದು ಕಾಶಿ ವಿಶ್ವನಾಥ ಮಂದಿರ. ಆದರೆ ಕಾಶಿ ಇನ್ನೂ ಹಲವಾರು ಮಂದಿರಗಳ ಮಹತ್ವವನ್ನು ಹೊಂದಿದೆ, ಅದರಲ್ಲಿ ಬಿಂದು ಮಾಧವ ದೇವಾಲಯ ಒಂದು. ಕಾಶಿಯನ್ನು ಸಪ್ತ ಮೋಕ್ಷ ಸ್ಥಳಗಳಲ್ಲಿ ಒಂದು ಎಂದು ಹೇಳಲಾಗುತ್ತದೆ. ಕಾಶಿಯನ್ನು ವಿಷ್ಣು ಕಾಶಿ ಮತ್ತು ಶಿವ ಕಾಶಿ ಎಂದು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ಮಣಿಕರ್ಣಿಕಾ ಘಾಟ್ನಿಂದ ಹಿಡಿದು ಆದಿ ಕೇಶವ ಘಾಟ್ವರೆಗೆ ವಿಷ್ಣು ಕಾಶಿ ಮತ್ತು ಮಣಿಕರ್ಣಿಕಾ ಘಾಟ್ನಿಂದ