ಅರಮನೆಗಳ ನಗರಿ ಮೈಸೂರು ಸಾಂಸ್ಕೃತಿಕ ರಾಜಧಾನಿ ಎಂಬ ಖ್ಯಾತಿ ಪಡೆದಿದೆ. ಪ್ರವಾಸಿಗರ ಅಚ್ಚುಮೆಚ್ಚಿನ ತಾಣವಾಗಿರುವ ಮೈಸೂರು ಗತಕಾಲದ ಇತಿಹಾಸ ಸಾರುವ ನಗರಿ. ಕ್ರಿ.ಶ.1399ರಲ್ಲಿ ಯದುರಾಯನಿಂದ ಸ್ಥಾಪನೆಗೊಂಡ ಮೈಸೂರು ಅರಸು ಮನೆತನ ಪ್ರಾರಂಭದಲ್ಲಿ ವಿಜಯನಗರ ಸಾಮ್ರಾಜ್ಯದ ಅಧೀನದಲ್ಲಿತ್ತು.