ಗಣಪತಿ ಎನ್ನುವ ಪದದ ಮೂಲ ಅರ್ಥವೇ ಗಣಗಳ ನಾಯಕ, ಗಣಗಳ ಒಡೆಯ ಎಂದು. ಪುರಾಣ ಕಾಲದಿಂದಲೂ ಮೂವತ್ಮೂರು ಕೋಟಿ ದೇವತೆಗಳಿಗೂ ಮೊದಲು ಸಲ್ಲುವ ಪೂಜೆ ಗಣಪತಿಗೆ. ಸರ್ವ ಧರ್ಮದವರಿಂದಲೂ ಸರ್ವ ಜನಾಂಗಗಳಿಂದಲೂ ಪೂಜಿಸಲ್ಪಡುವ ಏಕೈಕ ದೈವವೇ ವಿನಾಯಕ. ಆದುದರಿಂದಲೇ ಈತನಿಲ್ಲದ ದೇಗುಲವಿಲ್ಲ. ಭಕ್ತರ ಇಷ್ಟಾರ್ಥಗಳನ್ನು ಪೂರೈಸುವ ಈತ ವಿನಾಯಕ, ಗಜಾನನ, ಗಣಪತಿ, ಏಕದಂತ, ಗಣೇಶ, ಮಂಗಳಮೂರ್ತಿ, ವಕ್ರತುಂಡ, ಸಿದ್ಧಿವಿನಾಯಕ, ಹೇರಂಭ, ಲಂಬೋದರ, ಮೂಷಿಕವಾಹನ, ಬಾಲಚಂದ್ರ, ಗಣನಾಯಕ, ವಿಘ್ನ ವಿನಾಶಕ, ವಿಘ್ನೇಶ್ವರ,